NammApp ಪ್ರೈವೆಸಿ ಪಾಲಿಸಿ

ಈ ಆಪ್ ನಲ್ಲಿ ನಿಮ್ಮ ಪ್ರೈವೆಸಿಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಕೆಳಕಂಡ ಅಂಶಗಳಿಂದ ಈ ಮಾತು ನಿಮ್ಮ ಅನುಭವಕ್ಕೆ ಬರುತ್ತದೆ.

  1. NammAppನಲ್ಲಿ ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವಂತೆ ನಿಮ್ಮ ನಿಜವಾದ ಹೆಸರನ್ನೇ ಬಳಸಬೇಕು ಎನ್ನುವ ನಿಯಮವಿಲ್ಲ. ನೀವು ಮುಕ್ತವಾಗಿ ಮರುನಾಮಕರಣ(!) ಮಾಡಿಕೊಳ್ಳಬಹುದು. ಆದರೆ ಗಮನಿಸಿ: ಈ ಸ್ವಾತಂತ್ರ್ಯದ ಜೊತೆಗೆ ನಿಮ್ಮ ಮೇಲೆ ಕೆಲವು ಜವಾಬ್ದಾರಿಗಳೂ ಬಂದು ಕೂರುತ್ತವೆ. ಅವುಗಳ ಬಗ್ಗೆ ನಮ್ಮ "ನಿಯಮಗಳು ಮತ್ತು ಷರತ್ತುಗಳು" ಪುಟವನ್ನು ನೋಡಿ.
  2. ಈ ಆಪಿಗೆ ಲಾಗಿನ್ ಆಗಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಲಾಗುತ್ತದೆ. ನಿಮ್ಮ ಫೋನಿಗೆ ಬರುವ OTP ಸಹಾಯದಿಂದ ಮಾತ್ರ ನೀವು ಲಾಗಿನ್ ಆಗಲು ಸಾಧ್ಯ. ಲಾಗಿನ್ ಆಗುವುದಕ್ಕೆ ಯಾವುದೇ ಪಾಸ್ವರ್ಡ್ ಅಥವಾ ಗುಟ್ಟಿನ ಅವಶ್ಯಕತೆ ಇಲ್ಲದಿರುವುದರಿಂದ ಆ ಪಾಸ್ವರ್ಡ್ ಬೇರೆಯವರ ಕೈಗೆ ಸಿಗುವ ಸಾಧ್ಯತೆಯಿಲ್ಲ.
  3. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಾವು ಬೇರೆ ಯಾರಿಗೂ ಕೊಡುವುದಿಲ್ಲ. ಆದರೆ ಆ ಸಂಖ್ಯೆಯ ಮೂಲಕ ನಿಮ್ಮನ್ನು ಸಂಪರ್ಕಿಸುವ ಹಕ್ಕು ನಮಗಿರುತ್ತದೆ. ಹಾಗೆಯೇ ನಿಮ್ಮ ವರ್ತನೆಯ ಆಧಾರದ ಮೇಲೆ ಕಾನೂನಿನವರೇನಾದರೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳಿದರೆ ಅದನ್ನು ನಾವು ಅವರಿಗೆ ಕೊಡುವುದು ಅನಿವಾರ್ಯವಾಗಿರುತ್ತದೆ.
  4. ಈ ಆಪ್ ಮೂಲಕ ನೀವು ಸಲ್ಲಿಸುವ ಬರವಣಿಗೆ, ಫೋಟೋಗಳು ಹಾಗೂ ವೀಡಿಯೋಗಳು ಆಪ್ ಬಳಸುವ ಎಲ್ಲರಿಗೂ ಕಾಣಿಸುತ್ತವೆ. ಹಾಗೆ ತಲುಪದಂತೆ ತಡೆಹಿಡಿಯಲು ಸಾಧ್ಯವಿಲ್ಲ. ಪೋಸ್ಟ್ ಮಾಡುವ ಮುನ್ನ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮಾಡಿ. ಹೀಗಿದ್ದರೂ ನಿಮ್ಮ ಪೋಸ್ಟನ್ನು ನೀವೇ ಅಳಿಸಿ ಹಾಕುವ ಅವಕಾಶ ನಿಮಗೆ ಯಾವಾಗಲೂ ಇರುತ್ತದೆ.
  5. ಕಳವಾದ ಕಾರಣದಿಂದ ಅಥವಾ ಬೇರೆ ಯಾವುದಾದರೊಂದು ಕಾರಣದಿಂದ ನಿಮ್ಮ ಫೋನ್ ಎನಾದರೂ ಬೇರೆಯವರ ಕೈಗೆ ಸಿಕ್ಕರೆ ಅದರಿಂದ ಮುಂದೆ ಆಗುವುದಕ್ಕೆ ನಾವು ಜವಾಬ್ದಾರರಲ್ಲ, ನೀವು ಜವಾಬ್ದಾರರು.
  6. ಈ ಆಪ್ ನಲ್ಲಿ ನಿಮ್ಮ ಯಾವುದೇ ವೈಯಕ್ತಿಕ ಸಂಪರ್ಕ ಮಾಹಿತಿಯನ್ನು ಬಹಿರಂಗ ಮಾಡಬೇಡಿ. ಹಾಗೆ ಮಾಡಿದರೆ ನಿಮ್ಮನ್ನು ಬ್ಯಾನ್ ಮಾಡುವ ಹಕ್ಕು ನಮಗಿರುತ್ತದೆ. ಸಂಪರ್ಕ ಮಾಹಿತಿಗಾಗಿ ಬೇರೆ ಯಾರಾದರೂ‌ ನಿಮ್ಮನ್ನು ಒತ್ತಾಯಿಸಿದರೆ ಅದನ್ನು ಆಪ್ ನಲ್ಲಿ ಸಲಹೆ ಕೊಡುವ ಮೂಲಕ ನಮ್ಮ ಗಮನಕ್ಕೆ ತನ್ನಿ.